ರೈಲಿನಲ್ಲಿ ಕಳವು: ತಾಸುಗಳೊಳಗೆ ಆರೋಪಿ ಸೆರೆ
ಕಾಸರಗೋಡು: ರೈಲಿನಲ್ಲಿ ಪ್ರಯಾಣಿಕನ ಐಪ್ಯಾಡ್, ಮೊಬೈಲ್ ಫೋನ್ ಇತ್ಯಾದಿ ಸಾಮಗ್ರಿಗಳನ್ನು ಕಳವುಗೈದ ಆರೋಪಿಯನ್ನು ಘಟನೆ ನಡೆದ 24 ತಾಸುಗಳೊಳಗಾಗಿ ಬಂಧಿಸುವಲ್ಲಿ ಕಾಸರಗೋಡು ರೈಲ್ವೇ ಪೊಲೀಸರು ಯಶಸ್ವಿಯಾಗಿದ್ದಾರೆ. ಮಧ್ಯಪ್ರದೇಶ ನಿವಾಸಿ ಬರೇದ್ರ ರಾವುತ್ತರ್ (37) ಬಂಧಿತ ಆರೋಪಿ. ಕಾಸರಗೋಡು ರೈಲ್ವೇ ಪೊಲೀಸ್ ಠಾಣೆಯ ಎಸ್.ಐ. ಸನಿಲ್ ಕುಮಾರ್‌ರ ನೇತೃತ್ವದ ಪೊಲೀಸರ ತಂಡ ಈತನನ್ನು ಬಂಧಿಸಿದೆ. ಮಂಗಳೂರಿನಿಂದ ಕಾಸರ ಗೋಡಿನತ್ತ ಬರುತ್ತಿದ್ದ ಮಂಗಳಾ ಲಕ್ಷದ್ವೀಪ್ ಎಕ್ಸ್‌ಪ್ರೆಸ್ ರೈಲು ಗಾಡಿಯಲ್ಲಿ ರಾತ್ರಿ ವೇಳೆ ಈ ಕಳವು ನಡೆದಿದೆ. ಇದರಲ್ಲಿ ಪ್ರಯಾಣಿಸುತ್ತಿದ್ದ ಮಲಪ್ಪುರಂ …