ಚಾಲಕ ಬಸ್‌ನೊಳಗೆ ನೇಣು ಬಿಗಿದು ಮೃತ್ಯು

ಕಲ್ಲಿಕೋಟೆ: ಖಾಸಗಿ ಬಸ್ ಚಾಲಕ ಬಸ್‌ನ ಒಳಗೆ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪೇರಾಂಬ್ರದಲ್ಲಿ ನಿಲುಗಡೆಗೊಳಿಸಿದ್ದ ಪೇರಾಂಬ್ರ- ವಡಗರ ರೂಟ್‌ನಲ್ಲಿ ಸಂಚರಿಸುವ ಬಸ್‌ನಲ್ಲಿ ಚಾಲಕ ಹರೀಶ್ (4೦) ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ. ಕೆಲಸ ಮುಗಿಸಿ ನಿನ್ನೆ ರಾತ್ರಿ ಮನೆಗೆ ತಲುಪಲು ವಿಳಂಬವಾದ ಹಿನ್ನೆಲೆಯಲ್ಲಿ ಪತ್ನಿ ಆದಿರ ಫೋನ್ ಕರೆ ಮಾಡಿದ್ದರು. ಕೂಡಲೇ ತಲುಪುವುದಾಗಿಯೂ ಹರೀಶ್ ತಿಳಿಸಿದ್ದರು. ಆದರೆ ಬಳಿಕವೂ ಬಾರದ ಹಿನ್ನೆಲೆಯಲ್ಲಿ ಮತ್ತೆ ಫೋನ್ ಕರೆ ಮಾಡಿದಾಗ ಸ್ವೀಕರಿಸಿರಲಿಲ್ಲ. ಮುಂಜಾನೆ ಹರೀಶ್‌ರ ಸಹೋದರ …

ಸ್ಟ್ರೀಟ್ ವೆಂಡರ್ ಸೆಂಟ್ರಲೈಸ್ಡ್ ರಿಹಾಬಿಲಿಟೇಶನ್ ಯೋಜನೆ: ಭ್ರಷ್ಟಾಚಾರ ತನಿಖೆ ನಡೆಸಲು ಬಿಜೆಪಿ ಆಗ್ರಹ

ಕಾಸರಗೋಡು: ಕೇಂದ್ರ ಸರಕಾರದ ಯೋಜನೆಯಾದ ಸ್ಟ್ರೀಟ್ ವೆಂಡರ್ ಸೆಂಟ್ರಲೈಸ್‌ಡ್ ರಿಹಾಬಿಲಿಟೇಶನ್‌ನಂಗವಾಗಿ ಹೊಸ ಬಸ್ ನಿಲ್ದಾಣದಲ್ಲಿ ನಿರ್ಮಿಸಿದ ಅಂಗಡಿ ಸಮುಚ್ಚಯದ ದುರುಪಯೋಗ ನಡೆಯುತ್ತಿರುವ ಬಗ್ಗೆ ಸಮಗ್ರ ತನಿಖೆ ನಡೆಸಬೇಕು, ಅರ್ಹರಾದವರಿಗೆ ಮಾತ್ರವೇ ಅಂಗಡಿ ಲಭ್ಯಗೊಳಿಸಬೇಕು, ಅನರ್ಹವಾಗಿ ಸ್ವಾಧೀನಪಡಿಸಿರುವುದನ್ನು ಹೊರತುಪಡಿಸಿ ಕ್ರಮ ಕೈಗೊಳ್ಳಬೇಕು ಮೊದಲಾದ ಬೇಡಿಕೆಗಳನ್ನು ಮುಂದಿಟ್ಟು ಬಿಜೆಪಿ ನಗರಸಭಾ, ವೆಸ್ಟ್ ಮತ್ತು ಈಸ್ಟ್ ಕಮಿಟಿಗಳ ಸಂಯುಕ್ತ ತಂಡ ನಗರಸಭಾ ಕಾರ್ಯದರ್ಶಿ, ಉಪಾಧ್ಯಕ್ಷರನ್ನು ಭೇಟಿಯಾಗಿ ಮಾತುಕತೆ ನಡೆಸಿದೆ. ಈ ಯೋಜನೆಯಲ್ಲಿ ಭ್ರಷ್ಟಾಚಾರದ ಆರೋಪ ಕೇಳಿಬಂದಿದ್ದು, ಈ ಬಗ್ಗೆ ತನಿಖೆ ನಡೆಸಬೇಕೆಂದು …

ಬಾವಿಗೆ ಬಿದ್ದು ಯುವತಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಕಾರಡ್ಕ ನಿವಾಸಿ ಯುವತಿ ಆವರಣಗೋಡೆಯಿಲ್ಲದ ಬಾವಿಗೆ ಬಿದ್ದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ ಯಾಗಿದ್ದಾರೆ. ಮಡಿಕೈ ಚಾಳಕಡವ್ ಆಯುರ್ವೇದ ಆಸ್ಪತ್ರೆ ಸಮೀಪದ ನಿವಾಸಿ ಆಟೋ ಚಾಲಕ ಸುರೇಂದ್ರರ ಪತ್ನಿ ಸರಳ (46) ಮೃತಪಟ್ಟ ಯುವತಿ. ನಿನ್ನೆ ಸಂಜೆ ಘಟನೆ ನಡೆದಿದೆ. ಬಾವಿಯ ಒಂದು ಭಾಗ ಕುಸಿದ ಸ್ಥಿತಿಯಲ್ಲಿದೆ. ತೋಟದ ಬಳಿ ಇರುವ ಬಾವಿಯ ಪರಿಸರ ದಲ್ಲಿ ಚಪ್ಪಲಿ ಕಂಡ ಹಿನ್ನೆಲೆಯಲ್ಲಿ ನಡೆಸಿದ ತನಿಖೆಯಲ್ಲಿ ಯುವತಿ ಬಾವಿಯಲ್ಲಿ ಬಿದ್ದಿರುವುದು ಕಂಡು ಬಂದಿದೆ. ಆಯ ತಪ್ಪಿ ಬಿದ್ದಿರಬೇ ಕೆಂದು ಶಂಕಿಸಲಾಗಿದೆ. …

ಪ್ರಕೃತಿ ವಿಕೋಪ ವೇಳೆ ಸಹಾಯಹಸ್ತ ನೀಡಲು ಕಾಂಗ್ರೆಸ್ ಕಾರ್ಯಕರ್ತರಿಗೆ ಸೋಮಶೇಖರ ಕರೆ

ಪೈವಳಿಕೆ: ವಿಪರೀತ ಮಳೆಯಿಂ ದಾಗಿ ಪ್ರಾಕೃತಿಕ ವಿಕೋಪಗಳು ಸಂs ವಿಸಿದ್ದು, ಇಂತಹ ಸಂದರ್ಭಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಜಾಗರೂ ಕತೆಯಿಂದ ಜನರಿಗೆ ಅಗತ್ಯಗಳಿಗೆ ಸ್ಪಂದಿಸಲು ಸಿದ್ಧರಾಗಿರಬೇಕೆಂದು ಜಿಲ್ಲಾ ಪಂಚಾಯತ್ ಸದಸ್ಯ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಸೋಮಶೇಖರ ಜೆ.ಎಸ್. ಕರೆ ನೀಡಿದ್ದಾರೆ. ಬಾಯಾರಿನ ಯುವಕ ಕಾಂಗ್ರೆಸ್ ಕಾರ್ಯಕರ್ತರ ನೇತೃತ್ವದಲ್ಲಿ  ಬಾಯಾರುಪದವಿನಲ್ಲಿ ಸ್ಥಾಪಿಸಿದ ಪಕ್ಷದ ನೂತನ ಧ್ವಜಸ್ತಂಭದಲ್ಲಿ ಧ್ವಜಾರೋಹಣ ನಡೆಸಿ ಅವರು ಮಾತನಾಡಿದರು. ಮಂಡಲ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಸಂತ ಕುಮಾರ್  ಅಧ್ಯಕ್ಷತೆ ವಹಿಸಿದರು. ಬ್ಲೋಕ್ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ …

ಕಡಲ್ಕೊರೆತ ತೀವ್ರ: ಸಂತ್ರಸ್ತರಿಗೆ ಸಹಾಯ ಲಭ್ಯಗೊಳಿಸಲು ಶಾರದಾನಗರ ಉಳಿಸಿ ಕ್ರಿಯಾ ಸಮಿತಿ ರೂಪೀಕರಣ

ಉಪ್ಪಳ: ಕಡಲ್ಕೊರೆತದಿಂದ ಮನೆ, ಬೆಳೆ ಕಳೆದುಕೊಂಡ ಜನರಿಗೆ ಸಹಾಯ ಒದಗಿಸುವ ನಿಟ್ಟಿನಲ್ಲಿ ಬಿಜೆಪಿ ನೇತೃತ್ವದಲ್ಲಿ 11 ಸದಸ್ಯರ ಶಾರದಾನಗರ ಉಳಿಸಿ ಕ್ರಿಯಾ ಸಮಿತಿಯನ್ನು ರೂಪೀಕರಿಸಲಾಯಿತು. ಶಾರದಾನಗರ ಭಜನಾಮಂದಿರದಲ್ಲಿ ನಡೆದ ಸಭೆಯಲ್ಲಿ ಮಂಗಲ್ಪಾಡಿ ಪಂಚಾಯತ್‌ನ ಶಾರದಾ ನಗರದಲ್ಲಿ ಮೀನು ಕಾರ್ಮಿಕರು ಸಹಿತದ ತೀರ ನಿವಾಸಿಗಳು ಮನೆ, ಭೂಮಿ ಕಳೆದುಕೊಂಡಿದ್ದು, ಇವರಿಗೆ ಮನೆ ನಿರ್ಮಿಸಲು ೪೦ ಲಕ್ಷ ರೂ., ಮನೆ ಕಳೆದುಕೊಂಡವರಿಗೆ 25ಲಕ್ಷ ರೂ. ಸರಕಾರ ಒದಗಿಸಬೇಕೆಂದು ಕ್ರಿಯಾ ಸಮಿತಿ ರೂಪೀಕರಣ ಸಭೆಯಲ್ಲಿ ಬಿಜೆಪಿ ರಾಜ್ಯ ಸಮಿತಿ ಸದಸ್ಯ ವಿ. …

ಬಿರುಸಿನ ಮಳೆ: ವಿವಿಧ ಹೊಳೆಗಳಲ್ಲಿ ಉಕ್ಕಿ ಹರಿಯುತ್ತಿರುವ ನೀರು

ಉಪ್ಪಳ: ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿದ ಮಳೆಗೆ ಉಪ್ಪಳ ಸಹಿತ ವಿವಿಧ ಹೊಳೆಗಳಲ್ಲಿ ನೀರು ಉಕ್ಕಿ ಹರಿಯುತ್ತಿದೆ. ಉಪ್ಪಳ, ಶಿರಿಯ, ಕುಬಣೂರು, ಸುವರ್ಣಗಿರಿ ಹೊಳೆಯಲ್ಲಿ ಭಾರೀ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದು, ಸಮೀಪದ ತೋಟಗಳಿಗೆ ನುಗ್ಗಿದೆ. ಕುಬಣೂರು ಶ್ರೀ ಶಾಸ್ತಾವು ಕ್ಷೇತ್ರದ ಒಳಗಡೆ ನೀರು ತುಂಬಿ ಜಲಾವೃತಗೊಂಡಿದೆ. ಶಾಂತಿಗುರಿ- ಕುಬಣೂರು ರಸ್ತೆಯಲ್ಲಿ ನೀರು ತುಂಬಿ ವಾಹನ ಸಂಚಾರ ಮೊಟಕಾಗುವ ಭೀತಿ ಕಂಡು ಬಂದಿದೆ. ಕುಬಣೂರು ಹೊಳೆಯ ದೇರ್ಜಾಲ್ ಸೇತುವೆ ಬಳಿ ಭಾರೀ ಪ್ರಮಾಣದಲ್ಲಿ ಮರದ ದಿಮ್ಮಿಗಳು, ತ್ಯಾಜ್ಯಗಳು …

ಕಡಲ್ಕೊರೆತ ತೀವ್ರಗೊಂಡ ಕೊಪಾಡಿ, ಶಾರದಾನಗರ ಕಡಪ್ಪುರಗಳಿಗೆ ಜಿಲ್ಲಾಧಿಕಾರಿ ತಂಡ ಭೇಟಿ

ಕಾಸರಗೋಡು: ಕಡಲ್ಕೊರೆತದಿಂದ ತೀವ್ರ ಸಂದಿಗ್ಧತೆಯಲ್ಲಿರುವ ಕುಂಬಳೆ ಕೊಪಾಡಿ ಕಡಪ್ಪುರಂ, ಉಪ್ಪಳ ಶಾರದಾ ನಗರ ಕಡಪ್ಪುರಂಗೆ ಜಿಲ್ಲಾಧಿಕಾರಿ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಸ್ಥಳೀ ಯರೊಂದಿಗೆ ಮಾತನಾಡಿದ ಜಿಲ್ಲಾಧಿ ಕಾರಿ, ಅಲ್ಲಿನ ಸಮಸ್ಯೆಗಳ ಬಗ್ಗೆ ತಿಳಿದುಕೊಂಡರು. ಕೊಪಾಡಿ ಕಡಪ್ಪುರದಲ್ಲಿ ೩ ಕುಟುಂ ಬಗಳನ್ನು ಈ ಮೊದಲೇ ಸ್ಥಳಾಂತರಿ ಸಲಾಗಿದೆ. ಪುನರ್ಗೇಹಂ ಯೋಜನೆ ಪ್ರಕಾರ ಸ್ಥಳೀಯ ನಿವಾಸಿಗಳಿಗೆ ಪುನರ್ವಸತಿ ಕ್ರಮಗಳನ್ನು ಶೀಘ್ರವೇ ನಡೆಸಲಾಗುವುದೆಂದು ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್ ತಿಳಿಸಿದರು. ಕಡಲ್ಕೊರೆತದ ಹಿನ್ನೆಲೆಯಲ್ಲಿ ಇಲ್ಲಿಂದ ಸ್ಥಳಾಂತರಗೊಳ್ಳಲು ಒಪ್ಪದಿದ್ದ ಕುಟುಂಬಗಳು ಕೂಡಾ …

ಬೇರಿಕೆಯಲ್ಲಿ ರಸ್ತೆ ಸಮುದ್ರಪಾಲು 4 ಮನೆಗಳು ನೀರುಪಾಲು ಭೀತಿಯಲ್ಲಿ

ಉಪ್ಪಳ: ಉಪ್ಪಳ ಶಿವಾಜಿನಗರದಲ್ಲಿ ಕಡಲ್ಕೊರೆತದಿಂದ ಮನೆ ಸಮುದ್ರ ಪಾಲಾದ ಬೆನ್ನಲ್ಲೇ ಮಂಗಲ್ಪಾಡಿ ಪಂಚಾ ಯತ್‌ನ 16ನೇ ವಾರ್ಡ್ ಮುಟ್ಟಂ ಬೇರಿಕೆಯಲ್ಲಿ ರಸ್ತೆ ಸಮುದ್ರಪಾಲಾಗು ತ್ತಿದ್ದು, ಸ್ಥಳೀಯರಲ್ಲಿ ಆತಂಕ ಉಂಟಾ ಗಿದೆ. ಈ ರಸ್ತೆ ಸಂಪೂರ್ಣ ನೀರುಪಾಲಾ ದರೆ ಈ ಪ್ರದೇಶದ ನೆಬಿನ್, ಇಬ್ರಾಹಿಂ, ಅನಿಲ್, ಆನಂದ ಎಂಬವರ ಮನೆಗೂ ಅಪಾಯವುಂಟಾಗಲಿದೆ. ಕಳೆದೆರಡು ದಿನಗಳಿಂದ ಈ ಪರಿಸರದಲ್ಲಿ ಕಡಲ್ಕೊ ರೆತ ಹೆಚ್ಚಾಗಿದೆ. ಶಾರದಾನಗರದಲ್ಲಿ ಶಶಿಕಲರ ಮನೆ ನೀರುಪಾಲಾಗಿದ್ದು, ಇಲ್ಲಿನ ಲಲಿತ, ನಿವೇದಿತ, ಗಿರಿಜ ಎಂ ಬವರ ಮನೆಗಳು ಅಪಾಯದಂಚಿನಲ್ಲಿದೆ. …

ಮಾರ್ಪನಡ್ಕ ಭಜನಾ ಮಂದಿರದ ಕಾಣಿಕೆ ಹುಂಡಿ ಕಳವುಗೈದ ಆರೋಪಿ ಸೆರೆ

ಬದಿಯಡ್ಕ:  ಮಾರ್ಪನಡ್ಕ ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದ ಹೊರಗಡೆ ಇರಿಸಲಾ ಗಿದ್ದ 2 ಕಾಣಿಕೆ  ಹುಂಡಿಗಳನ್ನು ಕಳವುಗೈದ ಪ್ರಕರಣದ ಆರೋಪಿ ಸೆರೆಗೀಡಾಗಿದ್ದಾನೆ. ಆದೂರು ಗ್ರಾಮದ  ಆದೂರು ಪಯಂಗಡಿ ಹೌಸ್‌ನ  ಸಾಬಿತ್ ಎ.ಪಿ (33) ಎಂಬಾತನನ್ನು  ಬದಿಯಡ್ಕ ಪೊಲೀಸ್ ಇನ್‌ಸ್ಪೆಕ್ಟರ್ ಅನೂಪ್‌ಕೃಷ್ಣ ನೇತೃತ್ವದ  ಪೊಲೀಸರು ಬಂಧಿಸಿದ್ದಾರೆ.  ಜುಲೈ ೨೯ರಂದು  ರಾತ್ರಿ ಕಾಣಿಕೆ ಹುಂಡಿಗಳನ್ನು ಕಳವುಗೈಯ್ಯಲಾಗಿತ್ತು. ಭಜನಾ ಮಂದಿರದ ಹೊರಗಡೆ ಸ್ಥಾಪಿಸಲಾಗಿದ್ದ  ಗುಳಿಗ ದೈವದ ಹುಂಡಿಯಿಂದ ಸುಮಾರು 2 ಸಾವಿರ ರೂ. ಹಾಗೂ ಇನ್ನೊಂದು ಹುಂಡಿಯಿಂದ ಸುಮಾರು 2ಸಾವಿರ ರೂ.ಗಳನ್ನು …

ಯಕ್ಷಗಾನ ಕಲಾವಿದ, ಸಾರಣೆ ಮೇಸ್ತ್ರಿ ಜಯೇಂದ್ರ ಆತ್ಮಹತ್ಯೆ

ಕುಂಬಳೆ: ಯಕ್ಷಗಾನ ಕಲಾ ವಿದ, ಸಾರಣೆ ಮೇಸ್ತ್ರಿ ಕೆಲಸ ಮಾಡಿ ಕೊಂಡಿದ್ದ ಕಿದೂರು ದಂಡೆಗೋಳಿ ಮಂಜಲ್ಪಡ್ಪು ನಿವಾಸಿ ಜಯೇಂದ್ರ ಕೆ. (54) ನೇಣು ಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ನಿನ್ನೆ ಬೆಳಿಗ್ಗೆ 9ರಿಂದ  6 ಗಂಟೆ ಮಧ್ಯೆ ಘಟನೆ ನಡೆದಿದೆ. ಇವರು ಮನೆಯಲ್ಲಿ ಏಕಾಂಗಿಯಾಗಿದ್ದ ವೇಳೆ ಈ ಘಟನೆ ನಡೆದಿದ್ದು, ಮನೆಮಂದಿ ಸಂಜೆ ವೇಳೆ ಬರುವಾಗ ಹಗ್ಗ ತುಂಡಾಗಿ ಕೊಠಡಿಯಲ್ಲಿ ಬಿದ್ದಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕೂಡಲೇ ಚೆಂಗಳದ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಆ ವೇಳೆ ನಿಧನರಾಗಿದ್ದಾರೆ. ಸುಂಕದಕಟ್ಟೆ ಮೇಳದಲ್ಲಿ …