ಪುತ್ತಿಗೆ ಪಂಚಾಯತ್‌ನ ಸ್ಥಳದಿಂದ ಮರಗಳನ್ನು ಕಡಿದು ಸಾಗಾಟ: ಕೇಸು ದಾಖಲು; ಪಂಚಾಯತ್ ಕಚೇರಿಗೆ ಡಿವೈಎಫ್‌ಐ ಮಾರ್ಚ್

ಪುತ್ತಿಗೆ: ಪುತ್ತಿಗೆ ಪಂಚಾಯತ್‌ನ ಅಧೀನತೆಯಲ್ಲಿರುವ ಸ್ಥಳದಿಂದ 1 ಲಕ್ಷ ರೂ. ಮೌಲ್ಯದ ಮರಗಳನ್ನು ಕಡಿದು ಸಾಗಿಸಿರುವುದಾಗಿ ದೂರಲಾಗಿದೆ. ಈ ಬಗ್ಗೆ ಕಾರ್ಯದರ್ಶಿ ಸುದೀಶ್ ನೀಡಿದ ದೂರಿನಂತೆ ಕುಂಬಳೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಎಡನಾಡು ವಿಲ್ಲೇಜ್‌ನ ಕೋರ್ನಕಂಡ ಎಂಬಲ್ಲಿ ಪಂಚಾಯತ್ ಅಧೀನತೆಯಲ್ಲಿರುವ ತೋಡಿನ ಬದಿಯಲ್ಲಿದ್ದ ಸುಮಾರು 50 ವರ್ಷಗಳ ಹಳಮೆಯುಳ್ಳ ಮಾವು, ಹಾಲೆ, ಅಕೇಶಿಯಾ ಮರಗಳನ್ನು ಕಡಿದು ಸಾಗಿಸಿರುವುದಾಗಿ ಪಂಚಾಯತ್ ಕಾರ್ಯದರ್ಶಿ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಮೇ 26ರಂದು ಮರ ಕಡಿದು ಸಾಗಿಸಿರುವುದಾಗಿ ಸಂಶಯಿಸಲಾಗುತ್ತಿದೆ. ತೋಡಿನ …

ಹಿರಿಯ ವ್ಯಾಪಾರಿ ನಿಧನ

ಬದಿಯಡ್ಕ:  ಬದಿಯಡ್ಕ ಬಸ್ ನಿಲ್ದಾಣ ಬಳಿಯ ನಿವಾಸಿ ಉಮಾನಾಥ್ ಕಾಮತ್ (72) ನಿನ್ನೆ ರಾತ್ರಿ ನಿಧನ ಹೊಂದಿದರು. ಹಿರಿಯ ಆರ್‌ಎಸ್‌ಎಸ್ ಕಾರ್ಯಕರ್ತನೂ ಆಗಿದ್ದ ಇವರು ಬದಿಯಡ್ಕದ ವಿದ್ಯಾದೀಪ ವೆರೈಟಿ ಸ್ಟೋರ್ಸ್‌ನ ಮಾಲಕನಾಗಿದ್ದರು. ಮೃತರು ಪತ್ನಿ ಉಷಾ ಕಾಮತ್, ಮಕ್ಕಳಾದ ದೀಪ, ವಿದ್ಯಾ, ಅಳಿಯ ಪ್ರಮೋದ್ ಕುಮಾರ್ ಕಿಣಿ, ಸಹೋ ದರ ಸುಬ್ರಹ್ಮಣ್ಯ ಕಾಮತ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಬಸ್ ಮಾಲಕ ನಿಧನ

ಕಾಸರಗೋಡು: ಕಾಸರಗೋಡು- ತಲಪಾಡಿ ರೂಟ್‌ನಲ್ಲಿ ಸಂಚರಿಸುವ ನೈಮಾ ಬಸ್‌ನ ಮಾಲಕ ಮೊಗ್ರಾಲ್ ರಹ್ಮತ್ ನಗರದ ನೈಮಾ ಮಂಜಿಲ್ ನಿವಾಸಿ ನಸೀರ್ ಯಾನೆ ನಜ್ಜು (50) ನಿಧನ ಹೊಂದಿದರು. ಅಲ್ಪಕಾಲದಿಂದ ಅಸೌಖ್ಯ ಬಾಧಿಸಿ ಇವರು ಚಿಕಿತ್ಸೆಯಲ್ಲಿದ್ದರು. ಮೃತರು ಪತ್ನಿ ನೂರ್‌ಜಹಾನ್, ಮಕ್ಕಳಾದ ಮಿಸ್ರಿಯ, ನುಹುಮಾನ್, ನುಫ, ನೂರ, ಸಹೋದರರಾದ ನಿಸಾರ್, ಶಬೀರ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮೃತದೇಹದ ಅಂತ್ಯ ಸಂಸ್ಕಾರ ಇಂದು ಬೆಳಿಗ್ಗೆ ಮೊಗ್ರಾಲ್ ಚಳಿಯಂಗೋಡ್ ಜುಮಾ ಮಸೀದಿ ಪರಿಸರದಲ್ಲಿ ನಡೆಸಲಾಯಿತು.

ವಿಧಾನಸಭೆಯಲ್ಲಿ ಶ್ವೇತಪತ್ರ ಮಂಡಿಸಿದ ಸರಕಾರ: ಕೇರಳದ: ಒಟ್ಟು ಸಾಲ 5.07 ಲಕ್ಷ ಕೋಟಿ ರೂ.

ತಿರುವನಂತಪುರ: ಕೇರಳದ ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಸಮಗ್ರ ಮಾಹಿತಿಗಳು  ಒಳಗೊಂಡ ಶ್ವೇಪತ್ರವನ್ನು ಮುಖ್ಯಮಂತ್ರಿ ವಿ.ಡಿ. ಸತೀಶನ್ ವಿಧಾನಸಭೆಯಲ್ಲಿ ಇಂದು ಬೆಳಿಗ್ಗೆ ಮಂಡಿಸಿದರು.  ಕೇರಳದ ಆರ್ಥಿಕ ಸ್ಥಿತಿ ಅತ್ಯಂತ ಗಂಭೀರವಾಗಿದ್ದು, ಒಟ್ಟು 5.07 ಲಕ್ಷ ಕೋಟಿ ರೂ. ಗಳ ಸಾಲ ಹೊಂದಿದೆ. ಸರಕಾರದ ಒಟ್ಟು ವಾರ್ಷಿಕ ಆದಾಯದಲ್ಲಿ ಶೇ. 77ರಷ್ಟು ಮೊತ್ತವನ್ನು ಸರಕಾರಿ ಸಿಬ್ಬಂದಿಗಳ ವೇತನ, ಪಿಂಚಣಿ ಮತ್ತು  ಪಡೆದ ಸಾಲದ ಬಡ್ಡಿ ಪಾವತಿಗಾಗಿ ವಿನಿಯೋಗಿಸಲಾಗುತ್ತಿದೆ. ರಾಜ್ಯದ ಸಾಲದ ಸ್ಥಿತಿ ಮಿತಿಮೀರ ತೊಡಗಿದ್ದು, ಇದನ್ನು ನಿಯಂತ್ರಿಸುವ ಅಗತ್ಯವಿದೆಯೆಂದು ಮುಖ್ಯಮಂತ್ರಿ …

ಆಸ್ಪತ್ರೆಗೆ ಹೋದ ಯುವತಿ ನಾಪತ್ತೆ

ಕುಂಬಳೆ: ಯುವತಿ ನಾಪತ್ತೆಯಾದ ಬಗ್ಗೆ ಪತಿ ಕುಂಬಳೆ ಪೊಲೀಸರಿಗೆ ದೂರು ನೀಡಿದ್ದಾರೆ. ಮಲಪ್ಪುರಂ ತಿರೂರಂಗಾಡಿ ಚೆಮ್ಮಾಡ್ ಕುನ್ನುಮೇಲ್ ಹೌಸ್‌ನ  ಮನ್ಸೂರ್ ಅಲಿ ಎಂಬವರ ಪತ್ನಿ ಹಾಗೂ ಕಯ್ಯಾರು ಗ್ರಾಮದ ಸುಬ್ಬಯ ಕಟ್ಟೆ ನಿವಾಸಿ  ಫಾತಿಮತ್ ಜುಹರಾ (27) ನಾಪತ್ತೆಯಾದ ಯುವತಿ.  ಮೇ 2ರಂದು ಬೆಳಿಗ್ಗೆ 10.30ಕ್ಕೆ ಸುಬ್ಬಯ್ಯಕಟ್ಟೆಯಿಂದ ಕುಂಬಳೆ ಆಸ್ಪತ್ರೆಗೆ ಹೋಗುವುದಾಗಿ ತಿಳಿಸಿ ಮನೆಯಿಂದ ಹೊರಹೋದ ಫಾತಿಮತ್ ಜುಹರಾ ಮರಳಿ ಹಿಂತಿರುಗಲಿಲ್ಲವೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಅವರ ಪತಿ ತಿಳಿಸಿದ್ದಾರೆ. ಅದರಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ …

ಜ್ಯೋತಿಷ್ಯಾಲಯದಲ್ಲಿ ಗಾಂಜಾ ಪತ್ತೆ: ಜ್ಯೋತಿಷಿ ಬಂಧನ

ಹೊಸದುರ್ಗ: ಜ್ಯೋತಿಷ್ಯಾಲ ಯದಲ್ಲಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಗಾಂಜಾ ಪತ್ತೆಯಾಗಿದೆ. ಪಯ್ಯನ್ನೂರು ಬಸ್ ನಿಲ್ದಾಣ ಸಮೀಪ ಕಾರ್ಯಾಚರಿ ಸುವ ಜ್ಯೋತಿಷ್ಯಾಲಯದಿಂದ  ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಕೇಸು ದಾಖಲಿಸಿಕೊಂಡ ಪಯ್ಯನ್ನೂರು ಪೊಲೀಸರು ಜ್ಯೋತಿಷ್ಯಾಲಯ ನಡೆಸುತ್ತಿದ್ದ ಜ್ಯೋತಿಷಿ ಕಾಂಕೋಲ್ ವಡಶ್ಶೇರಿಯ ಪಿ. ಶ್ರೀನಾಥ್ (41)ನನ್ನು ಬಂಧಿಸಿದ್ದಾರೆ. ಆಪರೇಶನ್ ತೂಫಾನ್‌ನ ಅಂಗವಾಗಿ ನಿನ್ನೆ ಸಂಜೆ ಎಸ್‌ಐ ಪಿ.ವಿ. ಅನುಶ್ರೀ ನೇತೃತ್ವದಲ್ಲಿ ಡಾನ್ಸಾಪ್ ತಂಡ ಜ್ಯೋತಿಷ್ಯಾಲ ಯದಲ್ಲಿ ತಪಾಸಣೆ ನಡೆಸುವ ವೇಳೆ ಗಾಂಜಾ ಪತ್ತೆಯಾಗಿದೆ. ಗುಪ್ತ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಪೊಲೀಸರು …

ಎಡಿಎಂ ನವೀನ್‌ಬಾಬು ಸಾವು: ಪ್ರಕರಣದ ತನಿಖೆ ಸಿಬಿಐಗೆ

ತಿರುವನಂತಪುರ: ಕಣ್ಣೂರು ಎಡಿಎಂ ಆಗಿದ್ದ ನವೀನ್‌ಬಾಬು ಅವರ ಸಾವಿಗೆ ಸಂಬಂಧಿಸಿದ ಪ್ರಕರಣದ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಲಾಗಿದೆ. ರಾಜ್ಯ ಸಚಿವ ಸಂಪುಟ ಸಭೆ ಈ ಬಗ್ಗೆ ತೀರ್ಮಾನ ತೆಗೆದುಕೊಂಡಿದೆ. ಎಡಿಎಂ ನವೀನ್‌ಬಾಬು ಅವರ ಪುತ್ರಿ ನಿರಂಜನ ನಾಯರ್‌ಗೆ ಆಶ್ರಿತ ನೇಮಕಾತಿ ನಡೆಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. 2024 ಅಕ್ಟೋಬರ್ 15ರಂದು ಮುಂಜಾನೆ ನವೀನ್‌ಬಾಬು ಕಣ್ಣೂರು ಪಳ್ಳಿಕುನ್ನುನಲ್ಲಿರುವ ಕ್ವಾರ್ಟರ್ಸ್‌ನಲ್ಲಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಪೆಟ್ರೋಲ್ ಪಂಪ್‌ಗಿರುವ ಅರ್ಜಿಯ ಮೇಲೆ ಕ್ರಮ ಕೈಗೊಳ್ಳಲು ವಿಳಂಬವಾದ ಹೆಸರಲ್ಲಿ …

ಖಾಸಗಿ ಬಸ್ ಉದ್ದಿಮೆಯನ್ನು ಸಂರಕ್ಷಿಸಬೇಕು- ಬಸ್ ಆಪರೇಟರ್ಸ್ ಫೆಡರೇಶನ್

ಕಾಸರಗೋಡು: ಖಾಸಗಿ ಬಸ್ ಉದ್ದಿಮೆಯನ್ನು ಸರಕಾರ ಸಂರಕ್ಷಿಸ ಬೇಕೆಂದು ಕೇರಳ ಸ್ಟೇಟ್ ಪ್ರೈವೇಟ್ ಬಸ್ ಆಪರೇಟರ್ಸ್ ಫೆಡರೇಶನ್ ಜಿಲ್ಲಾ ಸಮಿತಿ ಪದಾಧಿಕಾರಿಗಳು ಪತ್ರಿಕಾಗೋ ಷ್ಠಿಯಲ್ಲಿ ಒತ್ತಾಯಿಸಿದ್ದಾರೆ. ವಿದ್ಯಾರ್ಥಿ ಗಳಿಗೆ ಕಡಿಮೆ ದರದಲ್ಲಿ ಪ್ರಯಾಣ ಸೌಕರ್ಯ ಏರ್ಪಡಿಸಿ, ಕೋಟ್ಯಂತರ ರೂಪಾಯಿ ಸರಕಾರಕ್ಕೆ ಮುಂಚಿತವಾಗಿ ತೆರಿಗೆ ನೀಡುವ ಖಾಸಗಿ ಬಸ್ ಉದ್ದಿಮೆ ಭಾರೀ ಸಂದಿಗ್ಧತೆಯಲ್ಲಿದೆ. ಕೆಎಸ್‌ಆರ್ ಟಿಸಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಕರ್ಯವನ್ನು ಮಂಜೂರು ಮಾಡಿದರೆ ಖಾಸಗಿ ಬಸ್ ಉದ್ದಿಮೆ ಇನ್ನಷ್ಟು ಸಂದಿಗ್ಧತೆಗೆ ತಲುಪಲಿದೆ. ಅತ್ಯಲ್ಪ ಸಂಗ್ರಹವಾಗುವ ಆದಾಯದಿಂದ …

ಬಿಎಸ್‌ಎಫ್‌ಗೆ ನೇಮಕಗೊಂಡ ಯುವಕನಿಗೆ ಕಾಂಗ್ರೆಸ್‌ನಿಂದ ಗೌರವ

ಬದಿಯಡ್ಕ: ಭಾರತೀಯ ಗಡಿ ಭದ್ರತಾ ಸೇನೆ (ಬಿಎಸ್‌ಎಫ್)ಗೆ ನೇಮಕಗೊಂಡ ಚೆಡೆಕಲ್‌ನ ಕುಂಞಿಕಣ್ಣನ್‌ರ ಪುತ್ರ ದೀಪು ಅವರನ್ನು ಬದಿಯಡ್ಕ ಮಂಡಲ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಗೌರವಿಸಲಾಯಿತು. ಬದಿಯಡ್ಕ ಮಂಡಲ ಕಾಂಗ್ರೆಸ್ ಅಧ್ಯಕ್ಷ ಶ್ಯಾಂಪ್ರಸಾದ್ ಮಾನ್ಯ ಶಾಲು ಹಾಕಿ ಗೌರವಿಸಿದರು. ಬ್ಲೋಕ್ ಸದಸ್ಯ ಖಾದರ್ ಮಾನ್ಯ, ಯೂತ್ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀನಾಥ್ ಬದಿಯಡ್ಕ, ಲೋಹಿತಾಕ್ಷನ್, ಗಿರೀಶ್ ಮೊದಲಾದವರು ಭಾಗವಹಿಸಿದರು. ದೀಪು ಅವರಿಗೆ ಕಾಂಗ್ರೆಸ್ ಮಂಡಲ ಸಮಿತಿ ವತಿಯಿಂದ ಪಾರಿತೋಷಕ ನೀಡಲಾಯಿತು.

ಪೀಸ್ ಕ್ರಿಯೇಟಿವ್ ಶಾಲೆಯಲ್ಲಿ ವಿದ್ಯಾರ್ಥಿಗಳು ಮರಳಿ ಶಾಲೆಗೆ ಕಾರ್ಯಕ್ರಮ: ಖುರ್‌ಆನ್ ಕಂಠಪಾಠ ಮಾಡಿದ ವಿದ್ಯಾರ್ಥಿಗಳಿಗೆ ಗೌರವ

ಮಂಜೇಶ್ವರ: ಕುಂಜತ್ತೂರಿನ ಪೀಸ್ ಕ್ರಿಯೇಟಿವ್ ಶಾಲೆ ೨೦೨೬ -೨೭ನೇ ಶೈಕ್ಷಣಿಕ ವರ್ಷದ ಆರಂಭದಲ್ಲಿಯೇ ಒಂದು ವಿಶೇಷ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು. ಶಾಲೆಯು ವಿದ್ಯಾರ್ಥಿಗಳನ್ನು ಮರಳಿ ಶಾಲೆಗೆ ಸ್ವಾಗತಿಸುವುದರೊಂದಿಗೆ, ಕುರ್‌ಆನ್ ಅನ್ನು ಸಂಪೂರ್ಣವಾಗಿ ಕಂಠಪಾಠ (ಹಿಫ್‌ಝ್) ಮಾಡಿದ ಇಬ್ಬರು ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.ಸಾಹುಲ್ ಹಮೀದ್ – ರಜಿಯಾ ದಂಪತಿ ಪುತ್ರ ಹಾಫಿಲ್ ಮೊಹಿಯುದ್ದೀನ್ ಮಿಸಾಬ್ ಹಾಗೂ ಅಬ್ದುಲ್ ರಝಾಕ್ – ನಬೀಸಾ ದಂಪತಿ ಪುತ್ರ ಹಾಫಿಲ್ ಅಬ್ದುಲ್ ನೌಫಲ್ ಎಂಬೀ ವಿದ್ಯಾರ್ಥಿಗಳನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು. ಬಳಿಕ ಹಾಫಿಝ್ ಆಗಿರುವ ವಿದ್ಯಾರ್ಥಿಗಳು …